340 ವರ್ಷಗಳ ಕೆಳಗೆ ಹುತಾತ್ಮರಾದವರ ಸಮಾಧಿಗೆ ಅವರ ವಂಶಸ್ಥರು ಪೂಜೆ ಸಲ್ಲಿಸಿದ್ದಾರೆ.ಚಿತ್ರದುರ್ಗದಲ್ಲಿ ಬಿಚ್ಚಗತ್ತಿ ಭರಮಣ್ಣ ನಾಯಕ ಮತ್ತು ಹಿರೇಮದಕರಿ ನಾಯಕನನನ್ನು ನೆನಪು ಮಾಡಿಕೊಳ್ಳಲಾಗಿದೆ. ಆ ಇಬ್ಬರ ಸಮಾಧಿಗೆ ಪೂಜೆ ಸಲ್ಲಿಸಲಾಗಿದೆ.ಚಿತ್ರದುರ್ಗದ ಮದಕರಿ ನಾಯಕನ ವಂಶಸ್ಥರು ಮತ್ತು ನಾಯಕ ಸಮುದಾಯದ ಯುವಕರು, ಸಮಾಧಿಗಳಿಗೆ ಪೂಜೆ ಮಾಡಿ ನಮನ ಸಲ್ಲಿಕೆ ಮಾಡಿದ್ದಾರೆ.340 ವರ್ಷಗಳ ಕೆಳಗೆ ವಿವಿಧ ಯುದ್ಧಗಳಲ್ಲಿ ಇಬ್ಬರೂ ವೀರರು ಸಾವನ್ನಪ್ಪಿದ್ದರು. ಇಬ್ಬರು ವೀರರ ಸಮಾಧಿಯು ಚಿತ್ರದುರ್ಗ ಕೋಟೆಯ ಹೊರಭಾಗದಲ್ಲಿವೆ.