ಆಪರೇಷನ್ ಕಮಲ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡಿರುವ ಉಮೇಶ್ ಜಾಧವರ ತಮ್ಮ ಮುಂಬೈ ಪ್ರವಾಸದ ಬಗ್ಗೆ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ.ಉಮೇಶ್ ಜಾಧವ್ ಮುಂಬೈ ಭೇಟಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾಮರಾವ್ ಮಹಾರಾಜರ ಕರೆ ಮೇರೆಗೆ ಮುಂಬೈಗೆ ಹೋಗಿದ್ದೆ. ಸೇವಾಲಾಲ್ ಚೌಕ್ ಉದ್ಘಾಟನೆ ಹಿನ್ನೆಲೆಯಲ್ಲಿ ಮುಂಬೈಗೆ ಭೇಟಿ ನೀಡಿದ್ದೆ. ಇದೇ ಸಂದರ್ಭದಲ್ಲಿ ಗುಳೇ ಹೋಗಿರುವ ಕಲಬುರ್ಗಿ ಕ್ಷೇತ್ರದ ಮತದಾರರನ್ನೂ ಭೇಟಿಯಾಗಿದ್ದೇನೆ ಎಂದರು.ಇನ್ನು ಸುಮಾರು 50 ಮತದಾರರು ಮುಂಬೈಯಲ್ಲಿ ದುಡಿಮೆಗೆಂದು ಬಂದಿದ್ದಾರೆ.