ದೀಪಾವಳಿಯ ಆಚರಣೆ ಶುರುವಾಗಿದ್ದು ಶ್ರೀರಾಮನ ಕಾಲದಿಂದ. ತ್ರೇತಾಯುಗದ ಸಮಯದಲ್ಲಿ ಪ್ರಭು ಶ್ರೀರಾಮಚಂದ್ರನು ಹದಿನಾಲ್ಕು ವರ್ಷಗಳ ಕಾಲ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಪ್ರಜೆಗಳು ಬಂಗಾರದ ಕಲಶವನ್ನು ಚಿನ್ನ ಹಗೂ ಮಣಿ, ರತ್ನಗಳಿಂದ ಅಲಂಕರಿಸಿ ಮನೆಯೆದುರು ಹೊಸ್ತಿಲಿನ ಮೇಲಿಟ್ಟರು, ಸಂಪೂರ್ಣ ಅಯೋಧ್ಯೆಯನ್ನು ದೀಪದಿಂದ ಬೆಳಗಿಸಿದರು. 14 ವರ್ಷಗಳ ಕಾಲ ಕತ್ತಲು ಕವಿದಿದ್ದ ಅಯೋಧ್ಯಾನಗರಕ್ಕೆ ಶ್ರೀರಾಮಚಂದ್ರ ಪ್ರಭುವು ಬೆಳಕಾಗಿ ಬಂದನು. ಶ್ರೀರಾಮಚಂದ್ರ ಪ್ರಭುವಿನ ಆಗಮನದ ದಿನವನ್ನು ಪ್ರತಿ ವರ್ಷವು ಬೆಳಕಿನ ಹಬ್ಬವಾಗಿ,