ಬೆಂಗಳೂರು-ದಾವೂದ್ ೧೯೯೦ರ ಹೊತ್ತಿಗೆಲ್ಲಾ ಅಲ್ಕೈದಾ ಜೊತೆ ನಂಟು ಹೊಂದಿದ್ದ. ಸತ್ತಿರುವ ಒಸಾಮಾ ಬಿನ್ ಲ್ಯಾಡೆನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಅವನನ್ನು ಅಫ್ಘಾನಿಸ್ತಾನದಲ್ಲಿ ಆಗಾಗ ಭೇಟಿಯಾಗುತ್ತಿದ್ದ. ಈ ಸಂದರ್ಭದಲ್ಲೇ ಭಾರತವನ್ನು ಘಾಸಿಗೊಳಿಸಲು ನಿರ್ಧರಿಸಿದ್ದ. ಬಾಬ್ರಿ ಮಸೀದಿಯ ಧ್ವಂಸಕ್ಕೆ ಆತ ಮುಂಬೈಗೆ ಬಾಂಬಿಟ್ಟು ರಿವೇಂಜ್ ಹೇಳಲಿಲ್ಲ. ಆತನ ಜೊತೆಗಿದ್ದ ರಕ್ಕಸ ಅಲ್ಖೈದಾದ ಮತಾಂಧರಿಗೆ ಭಾರತವನ್ನು ಸುಡಲೇಬೇಕೆನ್ನುವ ದರ್ದಿತ್ತು. ಅವರೇ ಹೇಳುವ ಪ್ರಕಾರ ಅದು ಜಿಹಾದ್. ಅದಕ್ಕೆ ದಾವೂದ್ ಎಂಬ ಅಸ್ತçವನ್ನು ಎನ್ಕ್ಯಾಶ್ ಮಾಡಿಕೊಂಡಿದ್ದರು.ದಾವೂದ್