ಇಯರ್‌ಫೋನ್ ಹೆಚ್ಚಾಗಿ ಬಳಸುತ್ತಿದ್ದೀರಾ, ಹಾಗಿದ್ದರೆ ಕಿವುಡುತನ ಬರಬಹುದು ಎಚ್ಚರ!

bangalore| geetha| Last Modified ಭಾನುವಾರ, 12 ಸೆಪ್ಟಂಬರ್ 2021 (20:47 IST)
ಡಾ. ಅಥಿರಾ ರಾಮಕೃಷ್ಣನ್, ಇಎನ್‌ಟಿ ತಜ್ಞೆ, ಫೋರ್ಟಿಸ್ ಆಸ್ಪತ್ರೆ.
ಇತ್ತೀಚಿನದ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ಕಿವುಡು ತನ ಸಾಮಾನ್ಯವಾಗಿ ಹೋಗಿದೆ. ಹಿಂದೆಲ್ಲಾ 80 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಿವುಡು ತನ ಕಾಣುತ್ತಿದ್ದೆವು. ಆದರೀಗ, ವಯಸ್ಕರು, 50 ವರ್ಷ ಮೇಲ್ಪಟ್ಟವರಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. ಇದಕ್ಕೆ ಕಾರಣ ನಾವು ಹೆಚ್ಚಾಗಿ ಬಳಸುವ ಇಯರ್‌ಫೋನ್‌ಗಳು ಎನ್ನಲಾಗುತ್ತಿದೆ. 
ಹೌದು, ಮೊಬೈಲ್ ಬಳಕೆ ಹೆಚ್ಚಾದಂತೆ ಕರೆ ಸ್ವೀಕರಿಸಲು, ಹಾಡು ಕೇಳಲು ಸೇರಿದಂತೆ ಪ್ರತಿಯೊಂದಕ್ಕೂ ಇಯರ್‌ಫೋನ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಶಬ್ಧವು ನೇರವಾಗಿ ಕಿವಿಗಷ್ಟೇ ಸೀಮಿತವಾಗುವುದರಿಂದ ಕಿವಿಯ ಮೇಲೆ ಶಬ್ಧದ ಒತ್ತಡ ಹೆಚ್ಚು ಬೀಳುತ್ತದೆ. ಇದರಿಂದ ಕಾಲ ಕ್ರಮೇಣ ಕಿವುಡುತನಕ್ಕೆ ಹಾದಿ ಮಾಡಿಕೊಡಲಾಗುತ್ತದೆ.
ಕಿವುಡುತನಕ್ಕೆ ಕಾರಣಗಳಿವು: 
* ವಂಶಪಾರAಪರ್ಯತೆ
* ಕಿವಿಯ ಸೋಂಕು
* ಅತಿಯಾದ ಇಯರ್‌ಫೋನ್ ಬಳಕೆ
* ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇರುವುದು
* ಒತ್ತಡ
*ಶಬ್ಧಮಾಲಿನ್ಯಕ್ಕೆ ಕಿವಿಗಳನ್ನು ಹೆಚ್ಚು ತೆರೆದುಕೊಳ್ಳುವುದು
* ವಯಸ್ಸಾದ ಬಳಿಕ ನರಗಳ ದೋಷ
* ಕಿವಿ ಸೋಂಕು 
ಇಯರ್‌ಫೋನ್‌ಗೆ ಅಗ್ರಸ್ಥಾನ: ಸಾಮಾನ್ಯವಾಗಿ ಮೇಲ್ಕಂಡ ಸಮಸ್ಯೆಗಳಿಂದ ಕಿವುಡುತನ ಬರಬಹುದು ಎಂದು ಬಹುತೇಕರಿಗೆ ತಿಳಿದಿದೆ. ಆದರೆ, ಇಯರ್ ಫೋನ್‌ನ ಅತಿಯಾದ ಬಳಕೆಯಿಂದಲೂ ಕಿವುಡುತನಕ್ಕೆ ಕಾರಣವಾಗಬಹುದು ಎಂಬ ವಿಷಯ ಬಹಳಷ್ಟು ವಯಸ್ಕರಿಗೆ ತಿಳಿದಿಲ್ಲ. ಮೊಬೈಲ್‌ನ ರೇಡಿಷೇನ್‌ನನ್ನು ತಪ್ಪಿಸುವ ಸದುದ್ದೇಶದಿಂದ ಇಯರ್‌ಫೋನ್ ಬಳಕೆ ಮಾಡುವ ಅಭ್ಯಾಸ ರೂಢಿಸಿಕೊಂಡರೂ,  ಹೆಚ್ಚು ಶಬ್ಧವಿಟ್ಟು ಹಾಡು ಕೇಳುವುದರಿಂದ ಕಾಲಕ್ರಮೇಣ ಕಿವಿಯಿಂದ ಮೆದುಳಿಗೆ ಸಂಕೇತ ಸಾಗಿಸುವ ನರಗಳು ದುರ್ಬಲUಗೊಳ್ಳುತ್ತವೆ. ಇದರಿಂದ ಕಿವಿಡುತನ ಬರಬಹುದು.
ಕಿವುಡುತನ ತಡೆಯಲು ಕೆಲವು ಟಿಪ್ಸ್: 
* ಕರೆಗಳನ್ನು ಸ್ವೀಕರಿಸಲು ಮಾತ್ರ ಇಯರ್ ಬಳಕೆ ಮಾಡಿ.
* ಕೆಲವೊಮ್ಮೆ ಹಾಡುಗಳನ್ನ ಕೇಳಲು ಇಚ್ಚಿಸುವವರು ಕಡಿಮೆ ಶಬ್ಧದೊಂದಿಗೆ ಇಯರ್‌ಫೋನ್ ಬಳಸಿ. 
* ದಿನದ 12 ತಾಸು ಇಯರ್‌ಫೋನ್ ಕಿವಿಯಲ್ಲಿ ಇರುವುದನ್ನು ತಪ್ಪಿಸಿ. 
* ಆಗಾಗ್ಗೇ ಕಿವಿಯನ್ನು ವೈದ್ಯರೊಂದಿಗೆ ಪರೀಕ್ಷಿಸಿಕೊಳ್ಳಿ
* ಹೆಚ್ಚು ಶಬ್ಧ ಉಂಟು ಮಾಡುವ ವಸ್ತುಗಳಿಂದ ದೂರವಿರಿ
* ಕಿವಿಗೆ ನೇರವಾಗಿ ಚೂಪಾದ ವಸ್ತು ಇಡುವುದನ್ನು ನಿಯಂತ್ರಿಸಿ
* ವಯಸ್ಸಾದ ಬಳಿಕ ಕಿವಿಡುತನ ಕಾಡುತ್ತಿದ್ದರೆ ವೈದ್ಯರನ್ನು ಶೀಘ್ರವೇ ಸಂಪರ್ಕಿಸಿ,, ಇಲ್ಲವಾದರೆ, ಬಲವಂತದಿAದ ಕೇಳುವ ಪ್ರಯತ್ನ ಮಾಡುವುದರಿಂದ ಅದು ಮೆದುಳಿನ ಮೇಲೆ ಒತ್ತಡ ಬೀರಬಹುದು.
docter


ಇದರಲ್ಲಿ ಇನ್ನಷ್ಟು ಓದಿ :