ಮೈಸೂರು: ಚಲಿಸುತ್ತಿದ್ದ ಕಾರು ನಿಂಯತ್ರಣ ತಪ್ಪಿ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯರೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಆಯುರ್ವೇದ ವೈದ್ಯ ಚೇತನ್ ಕುಮಾರ್(30)ಮೃತಪಟ್ಟವರು. ಇಂದು ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಭಾರತ್ ಕ್ಯಾನ್ಸರ್ ಆಸ್ಪತ್ರೆ ಕಡೆಯಿಂದ ಬೋಗಾದಿ ಕಡೆಗೆ ಬರುತ್ತಿದ್ದಾಗ ಅರ್ಬನ್ ಹಾಥ್ ಕಾಂಪೌಂಡ್ಗೆ ಕಾರು ಗುದ್ದಿದ್ದು ಸ್ಥಳದಲ್ಲೇ ವೈದ್ಯ ಚೇತನ್ ಕುಮಾರ್ ಮೃತಪಟ್ಟಿದ್ದಾರೆ. ಈ ವೇಳೆ ಕಾರು ಅತಿವೇಗದಲ್ಲಿದ್ದು, ವೈದ್ಯರು ನಿದ್ರೆಯ ಮಂಪರಿನಲ್ಲಿದ್ದುದೇ