ಬೆಂಗಳೂರು : ಪತ್ನಿ ಬೆಳಗ್ಗೆ ತಡವಾಗಿ ಏಳುತ್ತಾಳೆ ಎಂದು ಪತಿಯೊಬ್ಬ ತನ್ನ ಪತ್ನಿ ವಿರುದ್ಧ ವಿಚಿತ್ರ ದೂರನ್ನು ನಿಡಿದ ಪ್ರಕರಣ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಮ್ರಾನ್ ಖಾನ್ ಎಂಬಾತ ತನ್ನ ಪತ್ನಿ ಆಯೇಷಾ ಕಳೆದ ಐದು ವರ್ಷಗಳಿಂದಲೂ ನನಗೆ ಹಿಂಸೆ ನೀಡುತಿದ್ದಾಳೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ. ರಾತ್ರಿ ಮಲಗಿದರೆ ಮಧ್ಯಾಹ್ನ 12:30ಕ್ಕೆ ಏಳುತ್ತಾಳೆ. ಮತ್ತೆ ಸಂಜೆ 5:30ಕ್ಕೆ ಮಲಗಿ ರಾತ್ರಿ 9:30ರ ತನಕ ನಿದ್ರೆ ಮಾಡುತ್ತಾಳೆ.