ಚಿಕ್ಕಬಳ್ಳಾಪುರ : ನಾನು ಆಂಜನೇಯನ ಭಕ್ತ ಅಂತ ಹೇಳಿಕೊಂಡರೆ ಸಾಲದು, ಆಂಜನೇಯನ ರೀತಿ ಕೆಲಸ ಮಾಡಬೇಕು ಎಂದು ಸಚಿವ ಸುಧಾಕರ್ ಅವರು ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರದ ನಂತರ ಮಾತನಾಡಿದ ಸುಧಾಕರ್, ಹಿಂದೆಂದೂ ಕಾಣದಂತಹ ಸ್ಥಾನಗಳ ಏರಿಕೆ ಆಗಿ ಸ್ವಂತ ಬಲದಿಂದ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಪರ ಅಲೆ ಇದೆ. ಮೋದಿ ಬಂದ ಕಡೆ ಸ್ಥಾನಗಳ