ಚಿಕ್ಕಬಳ್ಳಾಪುರ : ಉಕ್ರೇನ್ನಲ್ಲಿರೋ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ.ಈಗಾಗಲೇ ನಾನು ಹಾಗೂ ಸಿಎಂ ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ಉಕ್ರೇನ್ನ ಭಾರತದ ರಾಯಭಾರಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಅಂತ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾರೂ ಕೂಡ ನೀವಾಗೇ ನೀವೆ ತೀರ್ಮಾನ ಮಾಡಿಕೊಂಡು ರುಮೇನಿಯಾ, ಪೊಲೆಂಡ್ ಸೇರಿದಂತೆ ಇತರೆ ಬಾರ್ಡರ್ ಏರಿಯಾಗಳಿಗೆ ಹೋಗುವ