ಬೆಂಗಳೂರು : ಭಾನುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರದ ಗೃಹಸಚಿವರ ಜೊತೆ ಸಭೆ ನಡೆಸಿ ಬರ ಪರಿಹಾರ ಕೊಡಿಸಲು ಯೋಗ್ಯತೆ ಇಲ್ಲದ ಬಿಜೆಪಿ ಡೋಂಗಿ ನಾಯಕರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ರಾಜ್ಯ ಬಿಜೆಪಿಯವರೂ ಸಹ ಒಂದು ಒಕ್ಕೂಟವನ್ನು ಮಾಡಿಕೊಂಡಿದ್ದಾರೆ. ಯಾವಾಗ ಬೇಕಾದರೂ ಅವರು ಕೇಂದ್ರ ಗೃಹಸಚಿವರೊಡನೆ ಮಾತುಕತೆ ನಡೆಸಬಹುದು. ಸುಮ್ಮನೆ ಅಲ್ಲಿ ಇಲ್ಲಿ ಪ್ರತಿಭಟನೆ ಮಾಡಿ ನಾಟಕ ಮಾಡುವ ಬದಲು ತಮ್ಮ