ಬೆಂಗಳೂರು : ಉಪಚುನಾವಣೆಯಲ್ಲಿ ಗೆದ್ದ 10 ಮಂದಿ ಶಾಸಕರು ಈಗಾಗಲೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಆದರೆ ನೂತನ ಸಚಿವರಿಗೆ ಇಂದೂ ಖಾತೆ ಹಂಚಿಕೆ ಮಾಡುವುದು ಅನುಮಾನ ಎನ್ನಲಾಗಿದೆ. ಹೌದು. ಇಂದು ಖಾತೆ ಹಂಚಿಕೆ ಮಾಡುವುದಾಗಿ ಸಿಎಂ ಹೇಳಿದ್ದರು. ಆದರೆ ಸದ್ಯದ ಸ್ಥಿತಿಯಲ್ಲಿ ಮೂಲ ಬಿಜೆಪಿಗರನ್ನು ಮನವೊಲಿಸುವುದೇ ಸವಾಲಾಗಿದೆ. ಹೀಗಾಗಿ ಇಂದು ಸಚಿವರಿಗೆ ಖಾತೆ ಹಂಚಿಕೆ ಅನುಮಾನ ಎನ್ನಲಾಗಿದೆ. ಮತ್ತೊಂದೆಡೆ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿಲ್ಲ. ಖಾತೆ ಹಂಚಿಕೆಗೆ ಹೈಕಮಾಂಡ್ ಅನುಮತಿ