ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಿಳಿಗೆರೆ ನಿವಾಸಿ ಸೌಮ್ಯಾ (26) ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂರು ವರ್ಷದ ಹಿಂದೆ ಮೈಸೂರಿನ ಆಲನಹಳ್ಳಿ ನಿವಾಸಿ ಗೌತಮ್ ಎಂಬಾತನ ಜೊತೆ ಸೌಮ್ಯಾಳನ್ನು ಮದುವೆ ಮಾಡಿಕೊಡಲಾಗಿತ್ತು. ಅತ್ತೆ ಹಾಗೂ ಗಂಡ ಪದೆ ಪದೇ ಹಣಕ್ಕಾಗಿ ಪೀಡಿಸುತ್ತಿದ್ದರಿಂದ ಕಳೆದ ಆರು ತಿಂಗಳಿಂದ ಸೌಮ್ಯಾ ತವರು ಮನೆ ಸೇರಿದ್ದರು. ಸೌಮ್ಯಾ ತವರು ಮನೆಯಲ್ಲಿ ಇದ್ದರೂ ಪೋನ್ ಮಾಡಿ ಗೌತಮ್ ಹಣ ತರುವಂತೆ ಪೀಡಿಸುತ್ತಿದ್ದ.