ಕಲಬುರಗಿ : ಖ್ಯಾತ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ್ (78) ಭಾನುವಾರ ರಾತ್ರಿ 10 ಗಂಟೆಗೆ ನಿಧನರಾಗಿದ್ದಾರೆ.ಕಳೆದ ದಿನಗಳಿಂದ ಕಾಮಾಲೆ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ಬದುಕುವುದು ಅಸಾಧ್ಯವಾದ ಹಿನ್ನಲೆಯಲ್ಲಿ ಅವರನ್ನು ಮನೆಗೆ ಕರೆತರಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಭಾನುವಾರ ರಾತ್ರಿ ಗಂಭೀರವಾದ ಹಿನ್ನಲೆಯಲ್ಲಿ ಸರಿಸುಮಾರು 10 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ 11 ರಿಂದ 12ಗಂಟೆಯವರೆಗೆ ಕಲಬುರಗಿಯ