ಬಸ್ ನಿಲ್ದಾಣಕ್ಕೆ ಲಿಂ.ಡಾ.ಪುಟ್ಟರಾಜ ಕವಿ ಗವಾಯಿಗಳ ಹೆಸರು ಇಡಬೇಕೆಂದು ಜನರು ಒತ್ತಾಯಿಸುತ್ತಿದ್ದು, ಅದಕ್ಕೆ ಸರಕಾರ ಹೀಗೆ ಹೇಳ್ತಿದೆ. ನವೀಕರಣಗೊಳ್ಳುತ್ತಿರುವ ಗದಗ ಹಳೆ ಬಸ್ ನಿಲ್ದಾಣಕ್ಕೆ ಡಾ. ಪುಟ್ಟರಾಜ ಗವಾಯಿಗಳ ಹೆಸರು ಇಡಬೇಕೆಂದು ಸಾರ್ವಜನಿಕರ ಸಂಘ -ಸಂಸ್ಥೆಗಳ ಬೇಡಿಕೆ ಹಾಗೂ ಒತ್ತಾಯ ಹೆಚ್ಚಾಗುತ್ತಿದೆ. ಈ ಬೇಡಿಕೆಯು ನ್ಯಾಯೋಚಿತವಾಗಿದೆ. ನಿಯಮಾನುಸಾರ ಈ ಕುರಿತು ಅಗತ್ಯ ಕ್ರಮ ಕೈಕೊಳ್ಳಲು ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಅವರು ವಾಯವ್ಯ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದು