Widgets Magazine

ದೆಹಲಿ ವಿಶೇಷ ಪ್ರತಿನಿಧಿಯಾಗಿ ಡಾ. ಅಜಯ್ ಅಧಿಕಾರ ಸ್ವೀಕಾರ

ಬೆಂಗಳೂರು| Jagadeesh| Last Modified ಮಂಗಳವಾರ, 29 ಜನವರಿ 2019 (17:35 IST)

ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಶಾಸಕ ಡಾ. ಅಜಯ್ಸಿಂಗ್ ಇಂದು ಕಾರ್ಯಭಾರ ವಹಿಸಿಕೊಂಡಿದ್ದಾರೆ.

ವಿಧಾನಸೌಧದ ಬ್ಲಾಕ್ವೆಂಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಾಲ್ಗೊಂಡು ಡಾ. ಅಜಯ್ಸಿಂಗ್ರವರಿಗೆ ಶುಭ ಹಾರೈಸಿದರು.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರುಗಳಾದ ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲ್, ಕೃಷ್ಣಭೈರೇಗೌಡ, ತುಕಾರಾಂ, ರಹೀಂಖಾನ್, ಡಾ. ಜಯಮಾಲಾ ಸೇರಿದಂತೆ ಹಲವು ಸಚಿವರು, ಹಲವು ಕಾಂಗ್ರೆಸ್ ಶಾಸಕರುಗಳು ಪಾಲ್ಗೊಂಡು ಶುಭ ಕೋರಿದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಡಾ. ಅಜಯ್ಸಿಂಗ್ ಮತ್ತು ಅವರ ಸಹೋದರ ವಿಜಯಸಿಂಗ್ ಅವರ ಹುಟ್ಟುಹಬ್ಬ ಇವತ್ತೇ ಆಗಿದ್ದು, ಹುಟ್ಟುಹಬ್ಬದಂದೆ ಡಾ. ಅಜಯ್ಸಿಂಗ್ ದೆಹಲಿ ಪ್ರತಿನಿಧಿಯಾಗಿ ಕಾರ್ಯಭಾರ ವಹಿಸಿಕೊಂಡಿದ್ದು ಕಾಕತಾಳಿಯವಾಗಿತ್ತು.


ಇದರಲ್ಲಿ ಇನ್ನಷ್ಟು ಓದಿ :