ಮಂಗಳೂರು : ರಾಜ್ಯದೆಲ್ಲಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಇದೀಗ ಕರ್ನಾಟಕದ ಪ್ರಸಿದ್ಧ ದೇವಾಲಯ ಧರ್ಮಸ್ಥಳದಲ್ಲೂ ಜಲಕ್ಷಾಮದ ಬಿಸಿ ತಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಎಲ್ಲಾ ಕಡೆ ನೀರಿಗಾಗಿ ಪರದಾಟ ಶುರುವಾಗಿದೆ. ಈ ನಡುವೆ ಕರ್ನಾಟಕದ ಪ್ರಸಿದ್ಧ ದೇವಾಲಯ ಧರ್ಮಸ್ಥಳದಲ್ಲಿ ಎಲ್ಲಾ ಕಾಲದಲ್ಲೂ ತುಂಬಿತುಳುಕುತ್ತಿದ್ದ ನೇತ್ರಾವತಿ ನದಿ ಬತ್ತಿ ಹೋಗಿದೆ. ಇದರಿಂದ ದೇವರ ದರ್ಶನ ಬರುತ್ತಿದ್ದ ಭಕ್ತರಿಗೆ ನೀರಿನ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ