ಕಲಬುರಗಿ ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳ 169 ವಾರ್ಡುಗಳ ಪೈಕಿ ಅಫಜಲಪುರ ಪುರಸಭೆಯ ವಾರ್ಡು 19ರಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕøತಗೊಂಡಿರುವ ಕಾರಣ ಸ್ಪರ್ಧೆ ನಡೆದ 168 ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ಕೈ ಮತ್ತೆ ಮೇಲಾಗಿದ್ದರೆ, ಮಾಜಿ ಶಾಸಕ ಬಿಜೆಪಿಯ ಮಾಲೀಕಯ್ಯ ಗುತ್ತೇದಾರ್ ಗೆ ತೀವ್ರ ಹಿನ್ನಡೆಯಾಗಿದೆ.ಕಲಬುರಗಿಯಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮತ್ತೆ ಮುಂದುವರಿಸಿದೆ.ಫಲಿತಾಂಶ ಪ್ರಟಕಗೊಂಡ 168 ಸ್ಥಾನಗಳ ಪೈಕಿ ಭಾರತೀಯ