Widgets Magazine

ಕೊರೊನಾ ವೈರಸ್ ನಿಂದ ಕುಡುಕರಿಗೆ ಸಿಗೋದಿಲ್ಲ ಮದ್ಯ

ಬೀದರ್| Jagadeesh| Last Modified ಗುರುವಾರ, 19 ಮಾರ್ಚ್ 2020 (18:45 IST)
ಕೊರೊನಾ ಎಫೆಕ್ಟ್ ನಿಂದಾಗಿ ಮದ್ಯ ಪ್ರಿಯರಿಗೆ ಬಿಗ್ ಶಾಕ್ ಬಿದ್ದಂತಾಗಿದೆ.  

 ಬೀದರ ಜಿಲ್ಲೆಯಲ್ಲಿ ಕೋವಿಡ್-19 ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮ ಜರುಗಿಸುವ ನಿಟ್ಟಿನಲ್ಲಿ, ಪಾನಿಕರು ಗುಂಪು ಗುಂಪಾಗಿ ಸೇರುವ ಸ್ಥಳಗಳಾದ ಸಿಎಲ್-4, ಸಿಎಲ್-7, ಸಿಎಲ್-9  ಮತ್ತು ಸಿಎಲ್-14 ವಿವಿಧ ಸನ್ನದುಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಹೀಗಂತ ಜಿಲ್ಲಾಧಿಕಾರಿ ಡಾ.ಹೆಚ್.ಆರ್.ಮಹಾದೇವ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶವನ್ನು ಹೊರಡಿಸಿದ್ದಾರೆ. ಅದರಂತೆ ಬೀದರ ಜಿಲ್ಲೆಯಾದ್ಯಂತ 18-03-2020ರ ಮಧ್ಯರಾತ್ರಿಯಿಂದ 26-03-2020ರ ಬೆಳಗ್ಗೆ 6 ಗಂಟೆವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :