Widgets Magazine

ಮದ್ಯಪಾನ ನಿಷೇಧ : ಹೊಸ ಬಾಂಬ್ ಸಿಡಿಸಿದ ಸಚಿವ

ಬೆಳಗಾವಿ| Jagadeesh| Last Modified ಶನಿವಾರ, 16 ಮೇ 2020 (18:20 IST)
ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆ ಮಾಡಿದ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಬಹುತೇಕ ಕಡೆಗಳಲ್ಲಿ ಅವಕಾಶ ನೀಡಲಾಗಿದೆ.

ಏತನ್ಮಧ್ಯೆ, ಮದ್ಯಪಾನ ನಿಷೇಧದ ಕುರಿತು ರಾಜ್ಯ ಸರಕಾರದ ನಿರ್ಧಾರವೇ ಅಂತಿಮವಾದದ್ದು ಎಂದು ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿ ಸುತ್ತಮುತ್ತ ಮಾರಾಟ ಜೋರಾಗಿದ್ದು, ಅದನ್ನು ಕಾನೂನು ಮೂಲಕ ಹತ್ತಿಕ್ಕಲಾಗುತ್ತದೆ ಎಂದಿದ್ದಾರೆ.
ಮದ್ಯಪಾನ ನಿಷೇಧದಿಂದ ನಕಲಿ ಮದ್ಯದ ಹಾವಳಿ ಹೆಚ್ಚಾಬಹುದು ಎನ್ನೋ ಆತಂಕವಿದೆ.

ಹೀಗಾಗಿ ಈ ಬಗ್ಗೆ ಸರಕಾರ ಕಠಿಣ ಕಾನೂನು ಜಾರಿ ಮಾಡೋದಕ್ಕೆ ಮುಂದಾಗಿದೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :