ನೀವು ಕುಡಿಯೋ ಹಾಲು ಶುದ್ಧವಾಗಿದೆಯಾ ಅನ್ನೋದನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಕೊಳ್ಳಬೇಕಿದೆ. ಏಕೆಂದ್ರೆ ಕುಡಿಯೋ ಹಾಲಿನಲ್ಲಿ ಎಣ್ಣೆ ಮಿಕ್ಸ್ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಜಾಲವೊಂದನ್ನು ಭೇದಿಸಲು ಪೊಲೀಸರು ಮುಂದಾಗಿದ್ದು, ಆರೋಪಿಗಳನ್ನು ಬಂಧನ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿ ಕಲಬೆರೆಕೆ ಹಾಲು ಸಿದ್ಧಪಡಿಸುತ್ತಿದ್ದ ಮಹಾಲಿಂಗ ಜಾಧವ ಎಂಬಾತನನ್ನು ಬಂಧನ ಮಾಡಿದ್ದಾರೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹಾಲಿನಲ್ಲಿ ಕಲಬೆರೆಕೆ ಮಾಡೋ ಪ್ರಕರಣಗಳು ಹೆಚ್ಚುತ್ತಿದ್ದು,