ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಎಲ್ಲೆಲ್ಲೂ ಈಗ ಮಾವಿನ ಹಣ್ಣುಗಳದ್ದೇ ಕಾರು ಬಾರು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ವೆರೈಟಿ ಹಣ್ಣುಗಳು ಬರುತ್ತಿದ್ದು, ಬಾಯಲ್ಲಿ ನೀರೂರಿಸುವಂತಿವೆ. ರಾಜ್ಯದಲ್ಲಿ ಅಕಾಲಿಕ ಮಳೆ ಹಾಗೂ ಬಿಸಿಗಾಳಿಯಿಂದ ಮಾವಿನ ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದೆ ಎಂಬ ಆತಂಕದ ನಡುವೆಯೇ ಬೆಂಗಳೂರಿನಲ್ಲಿ ಇಂದಿನಿಂದ 10 ದಿನಗಳ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ. ಬಾದಾಮಿ, ಮಲ್ಲಿಕಾ, ರಸಪುರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ,