ಸದಾ ರೈಲನ್ನು ಚಲಾಯಿಸುವ ಚಾಲಕನೊಬ್ಬ ರೈಲಿನ ಇಂಜಿನ್ ಮುಂಭಾಗದಲ್ಲೇ ಮೂತ್ರ ಮಾಡಿರುವ ಘಟನೆ ನಡೆದಿದೆ. ಸ್ಥಳೀಯರು ತಮ್ಮ ಮೋಬೈಲ್ ಗಳಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಲೋಕಲ್ ರೈಲಿನ ಇಂಜಿನ್ ಮುಂಭಾಗದಲ್ಲಿ ಚಾಲಕನೇ ಮೂತ್ರ ಮಾಡಿರೋದು ಇದೀಗ ಚರ್ಚೆಗೆ ಕಾರಣವಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಉಲ್ಲಾಸ್ ನಗರದಿಂದ ಮುಂಬೈ ಗೆ ಹೊರಡುತ್ತಿದ್ದ ರೈಲಿನ ಮುಂಭಾಗದಲ್ಲಿಯೇ ಮೂತ್ರ ಮಾಡಲಾಗಿದೆ. ಸ್ವತಃ ಚಾಲಕನೇ ಮಾಡಿರುವ ಈ ಕೃತ್ಯವನ್ನು ರೈಲ್ವೆ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.