ಟ್ವಿಟರ್ ನಲ್ಲೂ ಡ್ರೋಣ್ ಪ್ರತಾಪ್ ನದ್ದೇ ಸದ್ದು!

ಬೆಂಗಳೂರು| Krishnaveni K| Last Modified ಶುಕ್ರವಾರ, 17 ಜುಲೈ 2020 (10:40 IST)
ಬೆಂಗಳೂರು: ಡ್ರೋಣ್ ತಯಾರಿಸಿದ್ದೇನೆ ಎಂದು ಜನರನ್ನು ನಂಬಿಸಿದ್ದ ಮಂಡ್ಯದ ‘ಡ್ರೋಣ್’ ಪ್ರತಾಪ್ ಎಂಬಾತನ ವಿಚಾರ ಈಗ ಟ್ವಿಟರ್ ನಲ್ಲೂ ಸದ್ದು ಮಾಡಿದೆ.  
> ಡ್ರೋಣ್ ಪ್ರತಾಪ್ ಬಗ್ಗೆ ಖಾಸಗಿ ವಾಹಿನಿಯೊಂದು ಸಂದರ್ಶನ ನಡೆಸಿದೆ. ಈ ವೇಳೆ ಡ್ರೋಣ್ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಎರಡು ವರ್ಷಗಳಲ್ಲಿ 7000 ರಿಸರ್ಚ್‍ ಪೇಪರ್ ಓದಿದ್ದೇನೆ, ನಾನು ಸುಳ್ಳು ಹೇಳಿಲ್ಲ ಎಂದೆಲ್ಲಾ ಸಮರ್ಥಿಸಿಕೊಂಡಿದ್ದಾನೆ.>   ಆತನ ಸಂದರ್ಶನ ನೋಡಿದ ಬಳಿಕ ಟ್ವಿಟರಿಗರು ಆತನ ಬಗ್ಗೆ ಚರ್ಚೆ ಮಾಡಿದ್ದು, ಯಾವುದೇ ಸಂಶೋಧನೆ ವಿದ್ಯಾರ್ಥಿಗೂ ಆಗದ ಕೆಲಸ ಈತನಿಗೆ ಸಾಧ್ಯವಾಯಿತು ಎಂದರೆ ನಿಜಕ್ಕೂ ಈತ ಅದ್ಭುತ ಮನುಷ್ಯನೇ ಇರಬೇಕು ಎಂದು ವ್ಯಂಗ್ಯ ಮಾಡಿದ್ದಾರೆ. ಹಲವರು ಮೆಮೆಗಳ ಮೂಲಕವೂ ಡ್ರೋಣ್ ಪ್ರತಾಪ್ ನ ಟ್ರೋಲ್ ಮಾಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :