ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೇವಲ ಸ್ಯಾಂಡಲ್ ವುಡ್ ನಟ, ನಟಿಯರು ಡ್ರಗ್ಸ್ ದಂಧೆಯಲ್ಲಿ ಇಲ್ಲ. ಕೆಲವು ಅಧಿಕಾರಿಗಳು, ರಾಜಕೀಯದವರೂ ಇದ್ದಾರೆ ಎಂದಿದ್ದಾರೆ. ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಯೊಬ್ಬ ನಮ್ಮ ಸರಕಾರ ಇದ್ದಾಗ ನಡೆಸಿದ ಅಕ್ರಮ ದಂಧೆ ಮೇಲಿನ ರೇಡ್ ನಿಂದಾಗಿ ಶ್ರೀಲಂಕಾಕ್ಕೆ ಓಡಿಹೋಗಿದ್ದ ಎಂದು ಹೇಳಿದರು. ಶ್ರೀಲಂಕಾಕ್ಕೆ ಹೋದ ವ್ಯಕ್ತಿಯೇ ಮುಂಬೈಗೆ ತೆರಳಿದ್ದ ಶಾಸಕರ ಜೊತೆಗೂ ಇದ್ದ