ಆತ ರಾತ್ರಿ ಪೂರ್ತಿ ಜೊತೆಯಲ್ಲಿ ಪಾರ್ಟಿ ಮಾಡಿದ್ದಾನೆ, ಅದೇನಾಯ್ತೋ ಅವನಿಗೆ ಕುಡಿದ ನಶೆಯಲ್ಲಿ ಜೊತೆಯಲ್ಲಿ ದ್ದ ಸ್ನೇಹಿತನನ್ನೆ ಹತ್ಯೆ ಮಾಡಿದ್ದಾನೆ. ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಕೊಲೆ ನಡೆದಿದೆ. ಚೇತನ್ ಎಂಬ 21 ವರ್ಷದ ಯುವಕನನ್ನ ಭೀಕರವಾಗಿ ಕೊಲೆಗೈದಿರೋ ಅಮಾನುಲ್ಲ ಎಂಬಾತ ಕೊನೆಗೆ ತಾನೇ ಬಂದು ಪೊಲೀಸರಿಗೆ ಸೆರೆಂಡರ್ ಆಗಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಗಟ್ಟ ಭಾಗದಲ್ಲಿ ಈ ಭೀಕರ ಕೊಲೆ ನಡೆದಿದೆ. ಕೊಲೆಯಾದ ಚೇತನ್ & ಆರೋಪಿ ಅಮಾನುಲ್ಲ ಮೊದಲಿಂದಲೂ