ಬೆಂಗಳೂರು: ನಗರದ ತಲಘಟ್ಟಪುರದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನಗೆ ತಾನು ಬೆಂಕಿ ಹಚ್ಚಿಕೊಂಡಿದ್ದಲ್ಲದೆ, ತನ್ನಿಬ್ಬರು ಮಕ್ಕಳನ್ನೂ ಬೆಂಕಿಗೆ ಆಹುತಿ ಮಾಡಿದ್ದಾನೆ.ದುರದೃಷ್ಟವಶಾತ್ ಘಟನೆಯಲ್ಲಿ ಒಂದೂವರೆ ವರ್ಷದ ಕಿರಿ ಮಗ ಸಾವನ್ನಪ್ಪಿದ್ದು, ಇನ್ನೊಂದು ಮಗು ಮತ್ತು ಆರೋಪಿಗೆ ಗಾಯಗಳಾಗಿವೆ. ಆರೋಪಿಯನ್ನು ಶ್ರೀನಿವಾಸ ಮೂರ್ತಿ ಎಂದು ಗುರುತಿಸಲಾಗಿದೆ.ಮದ್ಯಪಾನ ಬಿಟ್ಟು ಬಿಡುವಂತೆ ಪತ್ನಿ ಎಷ್ಟು ಹೇಳಿದರೂ ಈತ ಕಿವಿಗೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಪತ್ನಿ ಕೋಪಿಸಿಕೊಂಡು ಮನೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಶ್ರೀನಿವಾಸ ಮೂರ್ತಿ