ಬೆಂಗಳೂರು: ಮಹಿಳೆಯರ ಜತೆ ಯಾವುದೇ ವ್ಯಕ್ತಿ ಅಸಭ್ಯ ವಾಗಿ ವರ್ತಿಸಿದಾಗ ಪೊಲೀಸರು ಬಂದು ರಕ್ಷಣೆ ನೀಡುತ್ತಾರೆ. ಆದರೆ ಇಂದು ರಕ್ಷಣೆ ನೀಡುವ ಪೊಲೀಸ್ ಮಹಿಳಾ ಪೇದೆಗಳ ಜತೆ ಇಬ್ಬರು ವ್ಯಕ್ತಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳಾದ ರೋಹಿತ್, ವೈಭವ್ ಇಬ್ಬರು ವ್ಯಕ್ತಿಗಳು ಪಬ್ ನಲ್ಲಿ ಕಂಠಪೂರ್ತಿ ಕುಡಿದು ಹೊರಬಂದು ಕರ್ತವ್ಯದಲ್ಲಿದ್ದ ಮಹಿಳಾ ಪೇದೆಗಳ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೊಯ್ಸಳ ಗಾಡಿಯ ಒಳಗಿದ್ದ ಮಹಿಳಾ