ಬೆಂಗಳೂರು: ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಇದೀಗ ದ್ವಿತೀಯ ಪತ್ನಿಗೆ ಭದ್ರತೆ ಕೋರಿದ್ದಾರೆ.ದ್ವಿತೀಯ ಪತ್ನಿ ಕೀರ್ತಿಗೆ ಮೊದಲ ಪತ್ನಿ ನಾಗರತ್ನ ಕಿರುಕುಳ ನೀಡಿರುವ ಆರೋಪ ಹೊರಿಸಿರುವ ವಿಜಯ್ ಸೂಕ್ತ ಭದ್ರತೆ ಕೊಡುವಂತೆ ಆಗ್ರಹಿಸಿದ್ದಾರೆ.ಹಲ್ಲೆ ಪ್ರಕರಣದ ಸಂದರ್ಭದಲ್ಲಿ ಕೀರ್ತಿ ಮೇಲೆ ನಾಗರತ್ನ ಹಲ್ಲೆ ನಡೆಸಿದ್ದು, ಕೀರ್ತಿ ಕಾರು ಚಾಲಕ ಮಹಮ್ಮದ್ ಗೆ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.