ಮೈಸೂರು : ನಾಡಹಬ್ಬ ದಸರಾ ಚಟುವಟಿಕೆಗಳು ಮೈಸೂರಿನಲ್ಲಿ ಗರಿಗೆದರುತ್ತಿವೆ. ಇದರ ಮೊದಲ ಭಾಗವಾಗಿ ನಾಳೆ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಮೈಸೂರಿಗೆ ಬರಲಿದೆ.ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ. ಜನಪ್ರತಿನಿಧಿಗಳು ಗಜಪಯಣಕ್ಕೆ ಸ್ವಾಗತ ಕೋರಲಿದ್ದಾರೆ.ಗಜಪಡೆಯ ಕ್ಯಾಪ್ಟನ್ ಅರ್ಜುನ ಸೇರಿದಂತೆ 9 ಆನೆಗಳು ಮೊದಲ ತಂಡದಲ್ಲಿ ಬರಲಿದ್ದು 2ನೇ ತಂಡದಲ್ಲಿ 5 ಆನೆಗಳು ಬರಲಿವೆ. ಜಂಬೂ ಸವಾರಿಯಲ್ಲಿ ಒಟ್ಟು 14 ಆನೆಗಳು ಭಾಗಿಯಾಗಲಿದ್ದು ಸ್ಟ್ಯಾಂಡ್ ಬೈ