ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಬ್ಬರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಆಯೋಜಿಸಲಾದ ನೇಕಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ. ಇದೀಗ ಮನೆ ಮನೆಗೆ ಮತ ಕೇಳಲು ಬರುತ್ತಿದ್ದಾರೆ. ಹುಷಾರಾಗಿರಿ, ಬೇಗ ಮನೆಗೆ ಬೀಗ ಹಾಕಿಕೊಳ್ಳಿ ಎಂದು ಮತದಾರರಿಗೆ ಕರೆ ನೀಡಿದರು. ಅಧಿಕಾರದ ಮದದಲ್ಲಿ ಕಲಿತಿದ್ದೇನೆಂದು ಮರೆತಿದ್ದಾರೆ. ದುಡ್ಡಿನ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವ