ಮಾಜಿ ಸಚಿವ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಇ.ಡಿ. ವಿಚಾರಣೆ ತೀವ್ರಗೊಳಿಸಿರುವಂತೆ ಇತ್ತ ಮಾಜಿ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.ಡಿಕೆ ಶಿವಕುಮಾರ್ ಗೆ ಈಡಿ ವಿಚಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಡಿ ಕೆ ಶಿವಕುಮಾರ್ ಮೇಲೆ ಇಡಿ ಪ್ರಯೋಗ ರಾಜಕೀಯ ದುರುದ್ದೇಶದಿಂದ ಕೂಡಿದೆ.ರಾಜಕೀಯವಾಗಿ ಏನು ಬೇಕಾದರೂ ಮಾಡಲಿ. ಆದರೆ ದುರುದ್ದೇಶದಿಂದ ಈಗ ಮಾಡುತ್ತಿದ್ದಾರೆ ಎಂದ್ರು.