Widgets Magazine

ಡಿಕೆ ಶಿವಕುಮಾರ ವಿರುದ್ಧದ ಇಡಿ ತನಿಖೆ ದುರುದ್ದೇಶದಿಂದ ಕೂಡಿದೆ- ಆರ್.ಧ್ರುವನಾರಾಯಣ್ ಆರೋಪ

ಮೈಸೂರು| pavithra| Last Modified ಮಂಗಳವಾರ, 3 ಸೆಪ್ಟಂಬರ್ 2019 (12:03 IST)
ಮೈಸೂರು : ವಿರುದ್ಧದ ಇಡಿ ತನಿಖೆ ದುರುದ್ದೇಶದಿಂದ ಕೂಡಿದೆ. ಇದು ಸರಿಯಲ್ಲ ಎಂದು ಮಾಜಿ ಸಂಸದ ಆರ್.ಧ್ರುನನಾರಾಯಣ್ ಆರೋಪಿಸಿದ್ದಾರೆ.
ಮೈಸೂರಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆ ಶಿವಕುಮಾರ್ ತೇಜೋವಧೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಗಣಿಗಾರಿಕೆ,ರಿಯಲ್ ಎಸ್ಟೇಟ್ ಉದ್ಯಮದಿಂದ ಹಣ ಸಂಪಾದನೆ  ಮೈಸೂರಿನಲ್ಲಿ ರಾಮದಾಸ್, ಸಾ.ರಾ.ಮಹೇಶ್ ಮಾಡಿದ್ದರು. ತನಿಖೆ ಮಾಡಲಿ ಆದರೆ ದುರುದ್ದೇಶದಿಂದ ಮಾಡುವುದು ಬೇಡ’ ಎಂದು ಹೇಳಿದ್ದಾರೆ.


‘ವಿರೋಧ ಪಕ್ಷಗಳನ್ನ ಸದೆಬಡಿದು ಪ್ರಧಾನಿ ಮೋದಿ, ಅಮಿತ್ ಶಾ ಅಧಿಕಾರ ಮಾಡ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್ ಹೆದರಿಸುತ್ತಿದ್ದಾರೆ. ಯಾರಾದ್ರೂ ಧ್ವನಿ ಎತ್ತಿದರೆ ರಾಜೀನಾಮೆ ಪಡೆಯುತ್ತಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಡಿಕೆಶಿ ವಿರುದ್ಧದ ಇಡಿ ತನಿಖೆ ಬಗ್ಗೆ ನಾಯಕರು ಖಂಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :