ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲು ಸೇರಿರೋ ದಿನವೇ ಕಾಂಗ್ರೆಸ್ ನ ಮಹಿಳಾ ಶಾಸಕಿಗೆ ಇಡಿ 9 ಗಂಟೆ ಡ್ರಿಲ್ ನಡೆಸಿದೆ. ಕಾಂಗ್ರೆಸ್ ನ ಪ್ರಭಾವಿ ನಾಯಕಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಡಿಕೆಶಿ ಜೊತೆಗೆ ಇರುವ ಸಂಬಂಧ? ಡಿಕೆಶಿ ತಮ್ಮ ಆಸ್ತಿಯನ್ನು ನಿಮ್ಮಹೆಸರಿಗೆ ಮಾಡಿಟ್ಟಿದ್ದಾರಾ? ನಿಮ್ಮ ಯಾವ ಯಾವ ವ್ಯವಹಾರದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ.50