ಬೆಂಗಳೂರು: ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಕಚೇರಿ ಮೇಲೆ ನಡೆದಿದ್ದ ಇ.ಡಿ ಅಧಿಕಾರಿಗಳ ದಾಳಿ ಅಂತ್ಯಗೊಂಡಿದೆ. ಸತತ 23 ಗಂಟೆಗಳ ಕಾಲ ನಡೆದ ಶೋಧದ ಬಳಿಕ ಇಡಿ ಅಧಿಕಾರಿಗಳು ಜಮೀರ್ ಮನೆಯಿಂದ ವಾಪಸ್ ಹೋಗಿದ್ದಾರೆ. ನಿನ್ನೆ ಮುಂಜಾನೆ ಆರು ಗಂಟೆಗೆ ಇನೋವಾ ಕಾರ್ನಲ್ಲಿ ಜಮೀರ್ ಖಾನ್ ಮನೆಗೆ ಬಂದಿದ್ದ ಆರು ಜನ ಇಡಿ ಅಧಿಕಾರಿಗಳ ತಂಡ ಸತತ 23 ಗಂಟೆಗಳ ಕಾಲ ಶೋಧ ನಡೆಸಿತ್ತು. ಒಟ್ಟು