ಶಾಲಾ ಮಕ್ಕಳ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ಕಿಡಿ ಕಾರಿದ್ದಾರೆ. ನಮ್ಮ ಸಮಿತಿ ನಡೆಸಿದೆ ಎನ್ನಲಾಗುವ ಬಗ್ಗೆ ಹಸಿ ಸುಳ್ಳುಗಳನ್ನು ಹೇಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ, ಬಿಸಿ ನಾಗೇಶ್ ಅವರು ನಾವು ಪಠ್ಯದಿಂದ ಗಾಂಧಿ, ಕುವೆಂಪು, ಅಂಬೇಡ್ಕರ್, ಮದಕರಿ ನಾಯಕ, ರಾಣಿ ಅಬ್ಬಕ್ಕ, ಕೆಂಪೇಗೌಡರು ಮುಂತಾದವ ಪಠ್ಯ ಕೈ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.