ಬೆಂಗಳೂರು: ನಾವು ಹೇಳಿದ್ರೆ ಅಧಿಕಾರಿಗಳು 9 ತಿಂಗಳಲ್ಲ, ಒಂಭತ್ತೇ ದಿನಕ್ಕೆ ವರ್ಗಾವಣೆಯಾಗಬೇಕು. ಅಧಿಕಾರಿಗಳೇನು ಮೇಲಿಂದ ಬಂದವರಾ? ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಸರ್ಕಾರದಿಂದ ದೊಡ್ಡವರಲ್ಲ. ನಾವು ಹೇಳಿದಂತೆ ಅವರು ನಡೆದುಕೊಳ್ಳಬೇಕು ಎಂದು ಸಚಿವ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗವಾದ ಬೆನ್ನಲ್ಲೇ ಹೇಳಿಕೆ ನೀಡಿರುವ ಅವರು ಅಧಿಕಾರಿಗಳು ದೊಡ್ಡವರಲ್ಲ, ಸರ್ಕಾರ ಹೇಳಿದ ಹಾಗೆ ಕೇಳಬೇಕು