ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ವಾರ್ಷಿಕವಾಗಿ 5-10 ಕೋಟಿ ರೂಪಾಯಿ ಕಪ್ಪವನ್ನು ಸಂದಾಯ ಮಾಡುತ್ತಿವೆ ಎನ್ನುವ ಗಂಭೀರ ಆರೋಪವನ್ನ ಹೊಸಪೇಟೆ ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಪ.ಯು.ಗಣೇಶ್ ಮಾಡಿದ್ದಾರೆ. ಈ ಸಂಬಂಧಿತ ಸಿಡಿಯೊಂದನ್ನ ಮಾಧ್ಯಮಗಳ ಮುಂದಿಟ್ಟಿದ್ದಾರೆ ಹೊಸಪೇಟೆಯ ಚೈತನ್ಯ ಟೆಕ್ನೋ ಸಂಸ್ಥೆಯ ಅಡಳಿತಾಧಿಕಾರಿ ವೆಂಕಟಶಿವು ಅವರೊಂದಿಗೆ ಗಣೇಶ್ ನಡೆಸಿದ ಸ್ಟ್ರಿಂಗ್ ಆಪರೇಶನ್ನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ಸ್ಫೋಟಗೊಂಡಿದೆ.