ಬೆಂಗಳೂರು: ಶಿಕ್ಷಣ ಇಲಾಖೆಯೇನೋ ಇಂದಿನಿಂದಲೇ ಈ ವರ್ಷದ ಶೈಕ್ಷಣಿಕ ವರ್ಷ ಶುರು. ಶಿಕ್ಷಕರು ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದಿದೆ. ಆದರೆ ಸಾರಿಗೆ ಸಂಚಾರವಿಲ್ಲದೇ ಶಾಲೆಗೆ ಹೋಗೋದು ಹೇಗೆ ಎಂಬುದು ಶಿಕ್ಷಕರ ಅಳಲು. ಕೊರೋನಾ ಕಡಿಮೆಯಾಗುವವರೆಗೂ ಆನ್ ಲೈನ್, ದೂರದರ್ಶನದ ಮೂಲಕವೇ ಶಿಕ್ಷಣ ನೀಡಲು ಇಲಾಖೆ ಸೂಚನೆ ಕೊಟ್ಟಿದೆ. ಇದಕ್ಕಾಗಿ ಇಂದಿನಿಂದಲೇ ತಯಾರಿ ಆರಂಭಿಸಲು ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದೆ.ಆದರೆ ಹಳ್ಳಿಗಳಲ್ಲಿ ಬಸ್ ಸೌಕರ್ಯವಿಲ್ಲದೇ ಶಾಲೆಗೆ ತೆರಳುವುದು ಹೇಗೆ ಎಂಬ ಪ್ರಶ್ನೆ