ಈಶ್ವರಪ್ಪ-ರೇಣುಕಾಚಾರ್ಯ ಹುಲಿವೇಷ ಸಮರ

ಬೆಂಗಳೂರು| Krishnaveni K| Last Modified ಗುರುವಾರ, 10 ಜೂನ್ 2021 (09:56 IST)
ಬೆಂಗಳೂರು: ಸಿಎಂ ರಾಜೀನಾಮೆ ವಿಚಾರ ಬಿಜೆಪಿಯ ಒಳಮುನಿಸನ್ನು ಮತ್ತಷ್ಟು ಬಹಿರಂಗಗೊಳಿಸಿದೆ. ಇದೀಗ ಸಚಿವ ಮತ್ತು ನಡುವೆ ಮಾತಿನ ಚಕಮಕಿ ನಡೆದಿದೆ.

 
ಮೊನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ಈಶ್ವರಪ್ಪ, ಸಿಎಂ ರಾಜೀನಾಮೆ ವಿಚಾರವನ್ನು ಯಾರೂ ಮಾತನಾಡುವ ಹಾಗಿಲ್ಲ. ರೇಣುಕಾಚಾರ್ಯರ ಹುಲಿವೇಷ ಆಟ ಬಿಜೆಪಿಯಲ್ಲಿ ನಡೆಯಲ್ಲ ಎಂದು ವ್ಯಂಗ್ಯ ಮಾಡಿದ್ದರು. ಸಿಎಂ ವಿರುದ್ಧ ಸಹಿ ಸಂಗ್ರಹಕ್ಕೆ ಮುಂದಾಗಿದ್ದ ರೇಣುಕಾಚಾರ್ಯಗೆ ಈಶ್ವರಪ್ಪ ಈ ರೀತಿ ಟಾಂಗ್ ಕೊಟ್ಟಿದ್ದರು.
 
ಇದೀಗ ಈಶ್ವರಪ್ಪಗೆ ಟ್ವಿಟರ್ ಮೂಲಕವೇ ತಿರುಗೇಟು ಕೊಟ್ಟಿರುವ ರೇಣುಕಾಚಾರ್ಯ, ನಾನು ಯಾವುದೇ ವೇಷಧಾರಿಯಲ್ಲ. ನನಗೆ ಹಿರಿಯರ ಬಗ್ಗೆ ಗೌರವವಿದೆ. ಬಣ್ಣ ಹಚ್ಚೋದು, ವೇಷ ಹಾಕೋದು ಗೊತ್ತಿಲ್ಲ. ನನಗೆ ಹುಲಿವೇಷ ಎಂದವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :