ರಾಜ್ಯ ಸರ್ಕಾರಕ್ಕೆ ತಗ್ಗಿ ಬಗ್ಗಿ ಇದ್ದವರಿಗೆ ರಕ್ಷಣೆಯಿದ್ದು, ದಕ್ಷ ಅಧಿಕಾರಿಗಳಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಪರಿಚಯವಾಗುವ ಮುನ್ನವೇ ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ ಎಂದು ದೂರಿದ್ದಾರೆ. ಕರ್ನಾಟಕ ರಾಜ್ಯ ಬಂದ್ಗೆ ಕರೆ ನೀಡುವ ಸಂಘಟನೆಗಳಿಗೆ ಸರ್ಕಾರ ಬೆಂಬಲ ನೀಡುತ್ತಿದ್ದು, ದರೋಡೆಕೋರರನ್ನು ಹೊಂದಿರುವ ಎರಡನೇ ರಾಜ್ಯ ಇದಾಗಿದೆ. ಅಮಿತ್ ಶಾ ಬರುವುದರಿಂದ ಸಿದ್ಧರಾಮಯ್ಯಗೆ ಭಯ ಆವರಿಸಿದೆ ಎಂದು