ಬೆಂಗಳೂರಿನಲ್ಲಿ ಮೊಟ್ಟೆಯ ಬೆಲೆ ಏರಿಕೆಯಾಗಿದ್ದು, ಮೊಟ್ಟೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕೋಳಿಗಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾದ ಪರಿಣಾಮ ಸಹಜವಾಗಿಯೇ ಮೊಟ್ಟೆಗಳು ದುಬಾರಿ ಎನಿಸಿವೆ. 2021ರ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.06 ರೂಪಾಯಿ ನಿಗದಿಯಾಗಿತ್ತು. ಕಳೆದ ವರ್ಷ ಜನವರಿಯಲ್ಲಿ 100 ಮೊಟ್ಟೆಗಳ ಒಂದು ಬ್ಯಾಚ್ಗೆ 437.58 ರೂಪಾಯಿ ಇತ್ತು. ಆದರೆ ಈ ಬಾರಿ 100 ಮೊಟ್ಟೆಗಳ 1 ಬ್ಯಾಚ್ಗೆ ಬರೋಬ್ಬರಿ 575 ರೂಪಾಯಿ ಆಗಿದೆ.