ಬೆಂಗಳೂರು: ಇಂದು ವರನಟ ಡಾ. ರಾಜ್ ಪುಣ್ಯ ತಿಥಿ. ಆದರೆ ಪ್ರತಿ ವರ್ಷದಂತೆ ಅಣ್ಣಾವ್ರ ಪುಣ್ಯತಿಥಿಯನ್ನು ಆಚರಿಸುವ ಅಭಿಮಾನಿಗಳಿಗೆ ಈ ಬಾರಿ ಅಡ್ಡಿ ಎದುರಾಗಿದೆ.ಮೇ 12 ರಂದು ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ರಾಜ್ಯದಲ್ಲಿ ಇದೀಗ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಗುಂಪು ಕಟ್ಟಿಕೊಂಡು ಈ ರೀತಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ನಿರ್ಬಂಧವಿದೆ.ಈ ಹಿನ್ನಲೆಯಲ್ಲಿ ಡಾ. ರಾಜ್ ಸ್ಮರಣೆಯಲ್ಲಿ ಅನ್ನದಾನ, ರಕ್ತದಾನ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ರಾಜ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.