ಉಪಚುನಾವಣೆ ಪ್ರಚಾರಕ್ಕಾಗಿ ಆಗಮಿಸಿದ ಸಚಿವ ರಾಮಲಿಂಗಾರೆಡ್ಡಿ ವಾಸ್ತವ್ಯ ಹೂಡಿದ್ದ ಕಾಟೇಜ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಹಣ ಹಂಚುತ್ತಿದ್ದಾರೆ ಎನ್ನುವ ವರದಿಗಳಿಂದಾಗಿ ನಿನ್ನೆ ರಾತ್ರಿ ದಿಢೀರನೆ ಚುನಾವಣೆ ಅಧಿಕಾರಿಗಳು ಸಚಿವ ರಾಮಲಿಂಗಾರೆಡ್ಡಿ ಕಾಟೇಜ್ ಮೇಲೆ ದಾಳಿ ಮಾಡಿದಾಗ ಸಚಿವರ ಬಳಿ 8 ಸಾವಿರ ರೂಪಾಯಿಗಳು ಪತ್ತೆಯಾಗಿವೆ. ಸಚಿವ ರಾಮಲಿಂಗಾರೆಡ್ಡಿ ವೈಯಕ್ತಿಕ ಖರ್ಚಿಗಾಗಿ 8 ಸಾವಿರ ರೂಪಾಯಿಗಳನ್ನಿಟ್ಟುಕೊಂಡಿರುವುದು ಖಚಿತವಾಗಿದ್ದರಿಂದ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಅಧಿಕಾರಿಗಳು