ಎಲೆಕ್ಷನ್ ಟೈಮ್: ಶಾಂತಿ ಕದಡಿದ್ರೆ ಹುಷಾರ್

ನೆಲಮಂಗಲ, ಬುಧವಾರ, 17 ಏಪ್ರಿಲ್ 2019 (15:33 IST)

ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಅಹಿತಕರ ಘಟನೆ ನೆಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನೆಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂ.ಗ್ರಾ. ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸಪಟ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. 

90 ಜನ ಸಿಐಎಸ್ಎಫ್ ಸಿಬ್ಬಂದಿ, ನೆಲಮಂಗಲ ಉಪವಿಭಾಗದ 500 ಪೊಲೀಸ್ ಸಿಬ್ಬಂದಿ, 2 ಕೆಎಸ್ಆರ್ಪಿ ತುಕಡಿ, 5 ಜನ ಇನ್ಸ್ ಪೆಕ್ಟರ್ ಗಳು, 7 ಜನ ಸಬ್ ಇನ್ಸ್ ಪೆಕ್ಟರ್ಗಳು ಸೇರಿದಂತೆ 2 ಪ್ರೊಬೆಶನರಿ ಡಿವೈಎಸ್ಪಿಗಳು ಇದ್ದರು.  ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಿಂದ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬಿ.ಎಚ್.ರಸ್ತೆ, ಸುಭಾಷ್ ನಗರ, ವಿಜಯನಗರ, ಸಂತೆ ಬೀದಿ, ಇಂದಿರಾನಗರ, ಸದಾಶಿವನಗರ ರಸ್ತೆಗಳಲ್ಲಿ ಭರ್ಜರಿಯಾಗಿ ರೂಟ್ ಮಾರ್ಚ್ ಮಾಡಿದ್ರು.

ಭಾರತೀಯ ಸೈನಿಕರು ರೂಟ್ ಮಾರ್ಚ್ ಮಾಡುವ ವೇಳೆ  ಕೆಲವು ಬಿಜೆಪಿ ಕಾರ್ಯಕರ್ತರು ಸೈನಿಕರಿಗೆ ಪುಷ್ಪಮಾಲೆ ಹಾಕಿ ಸ್ವಾಗತಿಸಿದ್ರೆ, ಮಕ್ಕಳು  ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಂಡಾಣು ದಾನ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ?

ಬೆಂಗಳೂರು : ಪ್ರಶ್ನೆ : ಹಲವು ಪ್ರಯತ್ನಗಳು ವಿಫಲವಾದ ನಂತರವೂ ನನ್ನ ತಂಗಿ ಮಗು ಪಡೆಯುವಾಸೆ ಹೊಂದಿದ್ದಾಳೆ. ...

news

ಎಚ್ಚರ! ಬೆಡ್ ಮೇಲೆ ಮಾಡುವ ಈ ಎರಡು ಕೆಲಸದಿಂದ ನೀವು ರೊಮ್ಯಾನ್ಸ್ ನಲ್ಲಿ ವೀಕ್ ಎಂದೆನಿಸಿಕೊಳ್ಳುತ್ತೀರಿ

ಬೆಂಗಳೂರು : ರೊಮ್ಯಾನ್ಸ್ ನಲ್ಲಿ ವೀಕು ಎಂದು ಯಾರಾದರೂ ಹೇಳಿದರೆ ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ...

news

ಹಣ ನೀಡಲು ಆಗದೆ ಮಗುವನ್ನೇ ಅಡವಿಟ್ಟ ಪಾಪಿ ತಂದೆ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?

ಬೀಜಿಂಗ್ : ತಂದೆ ತನ್ನ ಮಕ್ಕಳಿಗಾಗಿ ಇಡೀ ಜೀವನವನ್ನೇ ಅಡವಿಡುತ್ತಾನೆ. ಆದರೆ ಚೀನಾದಲ್ಲಿ ತಂದೆಯೊಬ್ಬ ...

news

ಕೊನೆಗೂ ಟಿಕ್ ಟಾಕ್ ಗೆ ಗೂಗಲ್ ನಿಷೇಧ

ನವದೆಹಲಿ: ಕೇಂದ್ರ ಸರಕಾರದ ಸೂಚನೆಯಂತೆ ಚೈನೀಸ್ ಆಪ್ ಟಿಕ್ ಟಾಕ್ ಗೆ ಗೂಗಲ್ ನಿಷೇಧ ಹೇರಿದೆ. ತಮಿಳುನಾಡಿನ ...