ಚುನಾವಣೆ: ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ದೇವೇಗೌಡರು?

ಬೆಂಗಳೂರು| Jagadeesh| Last Modified ಬುಧವಾರ, 24 ಏಪ್ರಿಲ್ 2019 (16:57 IST)
ಲೋಕಸಭೆ ಚುನಾವಣೆ 2ನೇ ಹಂತದ ಮತದಾನ ಮುಗಿದಿದ್ದೇ ತಡ, ಜೆಡಿಎಸ್ ವರಿಷ್ಠರು ನಮಗೂ ಅದಕ್ಕೂ ಸಂಬಂಧವೇ ಇಲ್ಲ ಅಂತ ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ ಪದ್ಮನಾಭನಗರ ನಿವಾಸದಲ್ಲಿ ಹೇಳಿಕೆ ನೀಡಿದ್ದು, ವಿಧಾನಸಭೆ ಎರಡು ಕ್ಷೇತ್ರಗಳ ಉಪಚುನಾವಣೆ ವಿಚಾರ ಕುರಿತು ಮಾತನಾಡಿದ್ರು. ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳ ವಿಚಾರ ಕುರಿತು ಪ್ರತಿಕ್ರಿಯಿಸಿದ್ದು, ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ರು. ಹಾಗಾಗಿ ಆ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲ್ಲ. ಅಲ್ಲಿ ಕಾಂಗ್ರೆಸ್ ನಿಂದ ಅಭ್ಯರ್ಥಿ ಹಾಕ್ತಾರೆ. ಜೆಡಿಎಸ್ ಅದಕ್ಕೆ ಬೆಂಬಲ ನೀಡುತ್ತೆ ಎಂದರು.

ಈ ವಿಚಾರವನ್ನ ಕುಮಾರಸ್ವಾಮಿ ನೋಡ್ಕೋತಾರೆ ಎಂದ ಅವರು, ನನಗೆ ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಇನ್ನು ಮಾಜಿ ಸಚಿವ ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ್ದು, ಅದಕ್ಕೂ ನಮಗೂ ಸಂಬಂಧ ಇಲ್ಲ. ನಾನು ಆ ಬಗ್ಗೆ ಮಾತಾಡಲ್ಲ ಎಂದ ಜೆಡಿಎಸ್ ವರಿಷ್ಠ
ಹೇಳಿದ್ರು.
ಇದರಲ್ಲಿ ಇನ್ನಷ್ಟು ಓದಿ :