ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾಗಿರುವ ಘಟನೆ ಮಂಗಳೂರಿನ ಬೊಂದೆಲ್ ನಲ್ಲಿ ನಡೆದಿದೆ. ಮನೆಯ ನೆಲಮಹಡಿಯಲ್ಲಿ ಚಾರ್ಜ್ಗೆ ಹಾಕಿದ ವೇಳೆ ಬೆಂಇ ಕಾಣಿಸಿಕೊಂಡ ಕಾರಣ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಆದರೆ, ವಾಹನ ಯಾವ ಕಂಪನಿಯದೆಂದು ಈವರೆಗೂ ತಿಳಿದು ಬಂದಿಲ್ಲ. ಇನ್ನು ಈ ಬಗ್ಗೆ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಬೈಕ್ಗಳು ಬೆಂಕಿಗಾಹುತಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ವಾಹನ ಸವಾರರು ಹಾಗು ಖರೀದಾರರಲ್ಲಿ ಆತಂಕ