ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದ ಉದ್ಯೋಗವಿಲ್ಲದೇ ತತ್ತರಿಸಿರುವ ಜನತೆಗೆ ಸರ್ಕಾರ ವಿದ್ಯುತ್ ಶಾಕ್ ಕೊಡಲು ಮುಂದಾಗಿದೆ.ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಪ್ರತಿ ಯೂನಿಟ್ ಗೆ 30 ಪೈಸೆ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್, ಮೇ ತಿಂಗಳ ಪರಿಷ್ಕರಣೆಯನ್ನು ಯಾವುದೇ ಬಡ್ಡಿ ವಿಧಿಸದೇ ಅಕ್ಟೋಬರ್-ನವಂಬರ್ ನಲ್ಲಿ ವಸೂಲು ಮಾಡಲು ಸೂಚಿಸಿದೆ.ಇದರೊಂದಿಗೆ ಪ್ರತಿ ಯೂನಿಟ್ ಗೆ ವಿದ್ಯುತ್ ದರ 3.84 ರಷ್ಟು ಹೆಚ್ಚಳವಾಗಲಿದೆ.