ಹುಲಿ ಹಿಡಿಯಲು ಕಾಯಾಚರಣೆಗೆ ಬಂದಿದ್ದ ಆನೆಯೇ ಕಾಡಿನೊಳಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಬಳಿಯ ಅಂತರಸಂತೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ತಾಲ್ಲೂಕಿನ ಅಂತರಸಂತೆ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಹುಲಿ, ಗ್ರಾಮದ ಹಸುಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.ಅರಣ್ಯ ಇಲಾಖೆಯು ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆಗಾಗಿ ದಸರಾ ಆನೆ ಅರ್ಜುನ ಜೊತೆ ನಾಲ್ಕು ಆನೆಗಳು ಬಂದಿದ್ದವು. ಈ ನಾಲ್ಕು