ದಾವಣಗೆರೆ : ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳು ದಾಳಿ ನಡೆಸಿವೆ. ಕಾಡಾನೆ ದಾಳಿಯಿಂದ ದೇವರ ಹೊನ್ನಾಳಿ ಗ್ರಾಮದ ಭರಮಪ್ಪ ಹಾಗೂ ಬೆನಕನ ಹಳ್ಳಿಯ ಮಳಲಿ ರಾಜಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದು , ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ದೇವರ ಹೊನ್ನಾಳಿಯಲ್ಲಿ ಆನೆ ದಾಳಿಯಿಂದ 2 ಹಸುಗಳಿಗೆ ತೀವ್ರ ಗಾಯಗಳಾಗಿವೆ. ಈ ಕಾಡಾನೆಗಳ ದಾಳಿಗೆ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡದಲ್ಲಿ ಒಬ್ಬ ವೃದ್ಧೆ ಸಾವನಪ್ಪಿದ್ದಾರೆ.