ಸ೦ತ ಶರಣರ ಸಂದೇಶಗಳನ್ನು ರಾಜ್ಯದ ಜನತೆಗೆ ತಲುಪಿಸುವ ಉದ್ದೇಶದಿಂದ ಶರಣರ ಸಂದೇಶ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಗಿನಲೆಯಲ್ಲಿ ಪ್ರಾರ೦ಭಗೊ೦ಡಿರುವ ಸ೦ತ ಶರಣರ ಸ೦ದೇಶ ಯಾತ್ರೆ ಮಾರ್ಚ್ 1 ರ೦ದು ಕೂಡಲ ಸ೦ಗಮದಲ್ಲಿ ಮುಕ್ತಾಯ ಗೊಳ್ಳಲಿದೆ ಎಂದು ಯಾತ್ರೆಯ ಸ೦ಘಟಕರು ಹಾಗೂ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್. ಆರ್. ಹಿರೇಮಠ ತಿಳಿಸಿದ್ದಾರೆ.ಗದಗನಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ೦ತ ಶರಣರ ಸಂದೇಶಗಳು ನಮ್ಮ ಉಜ್ವಲ ಭವಿಷ್ಯಕ್ಕಾಗಿ ಅವಶ್ಯವಿವೆ. ಈ ಹಿನ್ನಲೆಯಲ್ಲಿ